ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕೆಪಿಎಸ್ಸಿ ಪರೀಕ್ಷೆಗಳ ಸಿದ್ಧತೆ, ಪಾರದರ್ಶಕತೆ ಮತ್ತು ಸುಗಮ ನಿರ್ವಹಣೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಅಗತ್ಯ ಸುಧಾರಣೆಗಳನ್ನು ಜಾರಿಗೊಳಿಸುವ ಕುರಿತು ಚರ್ಚಿಸಿ ಸೂಕ್ತ ನಿರ್ದೇಶನ ನೀಡಿದೆ.
ಸಭೆಯಲ್ಲಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನನ್ನ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಎ.ಎಸ್.ಪೊನ್ನಣ್ಣ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರುನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಮತ್ತೊಂದು ಕನ್ನಡಿ ಅಂದ್ರೆ ಅದು ನಮ್ಮ ನಯನಮನೋಹರ ಜಲಪಾತಗಳು. ವಿಶ್ವವಿಖ್ಯಾತ ಜೋಗದಿಂದ ಹಿಡಿದು ಬರೋಬ್ಬರಿ 540ಕ್ಕೂ ಹೆಚ್ಚು ಜಲಪಾತಗಳಿರೋ ಕರುನಾಡು ನಮ್ಮ ಹೆಮ್ಮೆ. ಗಗನಚುಕ್ಕಿ-ಭರಚುಕ್ಕಿಯ ಭವ್ಯತೆ ಮತ್ತು ಮಲೆನಾಡಿನ ಹಸಿರ ನಡುವೆ ಧುಮ್ಮಿಕ್ಕುವ ನೂರಾರು ಜಲಧಾರೆಗಳೇ ನಮ್ಮ ಕರ್ನಾಟಕದ ಅಪ್ಪಟ ಜಲಸಿರಿ.
ಇಂದು ಮೈಸೂರಿನ ಹೆಬ್ಬಾಳದಲ್ಲಿರುವ ಶ್ರೀ ಲಕ್ಷ್ಮೀಕಾಂತ ದೇವಾಲಯದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ನಂತರ ಆದಿಚುಂಚನಗಿರಿ ಮೈಸೂರು ಶಾಖಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು.
"ಪ್ರತಿಯೊಬ್ಬರ ಜೀವನದ ಅನುಭವಗಳು ದಾಖಲೆಯಾಗಬೇಕು"
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಾ. ರಮ್ಯಾ ವೈ.ಎನ್. ಅವರು ನನ್ನ ಜೀವನದ ಆಧಾರಿತವಾಗಿ ರಚಿಸಿರುವ ʻಚಲಿಸುವ ಬಂಡೆʼ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದೆ.
ಪ್ರತಿಯೊಬ್ಬರ ಜೀವನದ ಅನುಭವಗಳು ದಾಖಲೆಯಾಗಬೇಕು. ಸಾಹಿತ್ಯ ಉಳಿಯಬೇಕಾದರೆ ಪುಸ್ತಕಗಳನ್ನು ಬರೆಯುವವರನ್ನು ನಾವು ಪ್ರೋತ್ಸಾಹಿಸಬೇಕು. ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ, ನಿಮ್ಮ ಪರಿಶ್ರಮದ ಮೇಲೆ ನಂಬಿಕೆ ಇಡಿ. ಇಂದು ನಾವು ಈ ಸ್ಥಾನಕ್ಕೆ ತಲುಪಲು ಅಪಾರ ಶ್ರಮಪಟ್ಟಿದ್ದೇವೆ. ಆರೋಗ್ಯ, ಕುಟುಂಬ ಹಾಗೂ ವೈಯಕ್ತಿಕ ಜೀವನವನ್ನೂ ಲೆಕ್ಕಿಸದೆ ಸಾಕಷ್ಟು ತ್ಯಾಗ ಮಾಡಿದ್ದೇವೆ. ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಮಾಡಬೇಕು, ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂಬುದೇ ನನ್ನ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಸಚಿವರಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿ, ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಶ್ರೀಮತಿ ಉಮಾಶ್ರೀ, ಶಾಸಕರಾದ ಶ್ರೀ ತನ್ವೀರ್ ಸೇಠ್, ಶ್ರೀ ಎ.ಆರ್. ಕೃಷ್ಣಮೂರ್ತಿ, ಶ್ರೀ ಜಿ.ಟಿ. ದೇವೇಗೌಡ, ಸಂಸದರಾದ ಶ್ರೀ ಸುನೀಲ್ ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಎಂ. ರೇವಣ್ಣ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ಎನ್.ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೈಸೂರಿನ ಕಾವೇರಿ ಎಂಪೋರಿಯಂನಲ್ಲಿಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ನಮ್ಮ ನಾಡಿನ ಹೆಮ್ಮೆಯ ʻಕರ್ನಾಟಕ ಕಂಚಿನ ವಸ್ತುʼಗಳ (Karnataka Bronze Ware) ಪ್ರದರ್ಶನಕ್ಕೆ ಭೇಟಿ ನೀಡಿ, ಕಲಾವಿದರ ಅದ್ಭುತ ಕೈಚಳಕ ಹಾಗೂ ಕಲಾಕೃತಿಗಳ ಸೌಂದರ್ಯವನ್ನು ವೀಕ್ಷಿಸಿದೆ.
ನಮ್ಮ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಮತ್ತು ಕರಕುಶಲ ಪರಂಪರೆಯನ್ನು ಸಂರಕ್ಷಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
2027ರಲ್ಲಿ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ
ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ 2027ರಲ್ಲಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಈ ಕುರಿತು ಮುಂದಿನ ಬಜೆಟ್ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿದೇಶಗಳಲ್ಲಿಯೂ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದೆ.
ಜಗತ್ತು ಒಂದಾಗಬೇಕಾದರೆ ಮೊದಲು ಮನುಷ್ಯರು ಒಂದಾಗಬೇಕು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ಧರ್ಮ ಮತ್ತು ಸಂಸ್ಕೃತಿ. ರಾಜಕೀಯದಲ್ಲಿರುವ ನಮ್ಮ ಹೆಸರುಗಳು ಭವಿಷ್ಯದಲ್ಲಿ ಮರೆಯಾಗಬಹುದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಮತ್ತು ಅವರ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ.
ಸಾಹಿತ್ಯ ಮತ್ತು ರಾಜಕಾರಣದ ನಂಟು ಹೊಸದೇನಲ್ಲ. ಅಧಿಕಾರವನ್ನು ಬಳಸಿಕೊಂಡು ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಆದರೆ ಸಾಹಿತ್ಯದ ಮೂಲಕ ಜನರ ಆಲೋಚನೆಗಳನ್ನೇ ಬದಲಾಯಿಸಬಹುದು. ಅಧಿಕಾರದ ಅವಧಿ ಸೀಮಿತವಾದರೂ ಸಾಹಿತ್ಯದ ಪ್ರಭಾವ ಶಾಶ್ವತ. ಒಬ್ಬ ವ್ಯಕ್ತಿಯ ಬದುಕು ಮುಗಿದರೂ ಆತ ಬರೆದ ಚಿಂತನೆಗಳಿಗೆ ಸಾವಿಲ್ಲ.
ವೀರಪ್ಪ ಮೊಯಿಲಿ ಅವರ ಸಾಹಿತ್ಯಿಕ ಹಾಗೂ ರಾಜಕೀಯ ಕೊಡುಗೆಗಳು ಅಪಾರ. 1985ರಲ್ಲಿ ತಮಗೆ, ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ವೀರಪ್ಪ ಮೊಯಿಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರಿಗೆ ಅವಕಾಶ ಕಲ್ಪಿಸಿದ ಅವರು, ಇದು ಸಾಹಿತ್ಯ ಲೋಕದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ವೀರಪ್ಪ ಮೊಯಿಲಿ ಅವರು ನಾಲ್ಕನೇ ತರಗತಿಯಲ್ಲಿದ್ದಾಗಲೇ ಕವಿತೆ ಬರೆಯುವ ಮೂಲಕ ಸಾಹಿತ್ಯದ ಒಲವು ಬೆಳೆಸಿಕೊಂಡವರು. ರಾಜಕೀಯ ಮತ್ತು ಸಾಹಿತ್ಯ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಅವರ ಸಾಧನೆ ವಿಶೇಷವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ರಾಜಕೀಯದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ.
ಮೊಯಿಲಿ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ 'ರಾಮಾಯಣ ಮಹಾನ್ವೇಷಣಂ' ಕೃತಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದೆ. ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತಂತೆ ಅವರು ಬರೆದಿರುವ ಭಾಗವನ್ನು ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.
ರಾಜಕಾರಣಿಗಳಿಗೆ ಸಾರ್ವಜನಿಕ ಕೆಲಸಗಳ ಒತ್ತಡದ ನಡುವೆ ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಸಮಯ ಮೀಸಲಿಡುವುದು ಸುಲಭವಲ್ಲ. ಆದರೆ ಮೊಯಿಲಿ ಅವರು ರಾಜಕೀಯ ಜೀವನದ ನಡುವೆಯೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ. ರಾಜಕಾರಣಿಗಳಾದ ಎಂ.ಪಿ. ಪ್ರಕಾಶ್, ಬಂಗಾರಪ್ಪ, ಎಸ್ ಎಂ ಕೃಷ್ಣ ಸೇರಿದಂತೆ ಅನೇಕ ಹಿರಿಯ ನಾಯಕರು ಕೂಡ ಸಾಹಿತ್ಯ ಪ್ರೇಮಿಗಳಾಗಿದ್ದರು.
ಕತ್ತಿಗಿಂತ ಲೇಖನಿ ಹರಿತ ಎಂಬ ಮಾತಿನಂತೆ ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ. ಸುತ್ತೂರು ಶ್ರೀಗಳು ನೂರಾರು ಬರಹಗಾರರನ್ನು ಪ್ರೋತ್ಸಾಹಿಸಿ, ಅನೇಕ ಪುಸ್ತಕಗಳ ರಚನೆಗೆ ಪ್ರೇರಣೆ ನೀಡಿದ್ದಾರೆ. ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಹಿರಿಯರು ನೀಡುತ್ತಿರುವ ಕೊಡುಗೆ ಅಪಾರ.
- ಇಂದು ಮೈಸೂರಿನಲ್ಲಿ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿಯವರ 'ವಿಶ್ವಸಂಸ್ಕೃತಿಯ ಮಹಾಯಾನ' (ಸಂಪುಟ 4)- ಗದ್ಯ ಮಹಾಕಾವ್ಯವನ್ನು ಲೋಕಾರ್ಪಣೆ ಮಾಡಿ, ಮಾತನಾಡಿದ ಪ್ರಮುಖ ಅಂಶಗಳು.
ನಮ್ಮ ಮೆಟ್ರೋಗೆ ಕರ್ನಾಟಕದ ಕೊಡುಗೆ ಕೇವಲ ನಿರ್ಮಾಣ ಕಾರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭೂಸ್ವಾಧೀನದಿಂದ ಹಿಡಿದು ದೈನಂದಿನ ಕಾರ್ಯಾಚರಣೆ, ಸಾಲ ಮರುಪಾವತಿ ಹಾಗೂ ಆರ್ಥಿಕ ನೆರವಿನವರೆಗೂ ಪ್ರತಿಯೊಂದು ಹಂತದಲ್ಲೂ ರಾಜ್ಯದ ಪಾಲು ಬಹುದೊಡ್ಡದು. ಬೆಂಗಳೂರಿನ ಮೆಟ್ರೋ ಜಾಲವನ್ನು ಕಟ್ಟಿ, ಯಶಸ್ವಿಯಾಗಿ ಮುನ್ನಡೆಸುವ ಹೊಣೆಗಾರಿಕೆಯನ್ನು ನಾವು ನಿರಂತರವಾಗಿ ನಿಭಾಯಿಸುತ್ತಿದ್ದೇವೆ.
Karnataka’s contribution to Namma Metro goes far beyond construction. From land acquisition and operations to loan repayment and financial support, we continue to shoulder the responsibility of building and sustaining Bengaluru’s Metro network.
#ಇದುನಮ್ಮಮೆಟ್ರೋ #IdhuNammaMetro
ಮಾಜಿ ಮುಖ್ಯಮಂತ್ರಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿಯವರ 'ವಿಶ್ವಸಂಸ್ಕೃತಿಯ ಮಹಾಯಾನ' (ಸಂಪುಟ 4) - ಗದ್ಯ ಮಹಾಕಾವ್ಯವನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಲೋಕಾರ್ಪಣೆ ಮಾಡಿದೆ.
ಈ ಸಂದರ್ಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯಿಲಿ, ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀ ಎಚ್.ಎಂ. ರೇವಣ್ಣ, ನನ್ನ ರಾಜಕೀಯ ಕಾರ್ಯದರ್ಶಿ ಶ್ರೀ ಎ.ಎಸ್. ಪೊನ್ನಣ್ಣ, ಶಾಸಕರು, ಜನಪ್ರತಿನಿಧಿಗಳು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು ಮೆಟ್ರೋ ಯೋಜನೆಯ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರವೇ ಅತಿ ಹೆಚ್ಚಿನ ಆರ್ಥಿಕ ಕೊಡುಗೆ ನೀಡುತ್ತಿದೆ. ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಹಣಕಾಸು ಒದಗಿಸುವುದರ ಜತೆಗೆ, ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣದ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ.
ಮೆಟ್ರೋ ಯೋಜನೆಯ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕ ಸರ್ಕಾರವೇ ಹೂಡಿಕೆ ಮಾಡಿದೆ. ಕಾಮಗಾರಿಗಳ ವಿಳಂಬದಿಂದ ಉಂಟಾಗುವ ಹೆಚ್ಚುವರಿ ವೆಚ್ಚದ ಹೊರೆಯಲ್ಲಿಯೂ ರಾಜ್ಯದ ಪಾಲು ಗಣನೀಯವಾಗಿದೆ. ಇದರೊಂದಿಗೆ, ಹೊಸ ಮೆಟ್ರೋ ಮಾರ್ಗಗಳ ನಿರ್ಮಾಣ ಮತ್ತು ಜಾಲದ ವಿಸ್ತರಣೆಗೆ ರಾಜ್ಯ ಸರ್ಕಾರ ನಿರಂತರವಾಗಿ ಅನುದಾನ ಹಾಗೂ ಅಗತ್ಯ ನೆರವು ಒದಗಿಸುತ್ತಿದೆ.
ಒಟ್ಟಾರೆ ಮೆಟ್ರೋ ಯೋಜನೆಯ ವೆಚ್ಚ, ನಿರ್ಮಾಣದ ನಂತರದ ನಿರ್ವಹಣೆ ಮತ್ತು ಭವಿಷ್ಯದ ವಿಸ್ತರಣೆ ಎಲ್ಲದರಲ್ಲೂ ಕರ್ನಾಟಕ ಸರ್ಕಾರದ ಪಾಲುದಾರಿಕೆ ಪ್ರಮುಖವಾಗಿದೆ. ಬೆಂಗಳೂರಿನ ಬೆಳವಣಿಗೆಗೆ ಪೂರಕವಾದ ಸಮಗ್ರ, ಸುಸ್ಥಿರ ಮತ್ತು ಸುಗಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ.
The Government of Karnataka is playing the leading role in financing the development and expansion of Namma Metro, contributing more than the Union Government across various phases of the project. Beyond funding construction, we are shouldering the costs of land acquisition, rehabilitation, state taxes, interest during construction, loan repayment and the operation and maintenance of metro services. We are also bearing a significant share of the additional costs arising from project delays while continuing to support new metro lines and network expansion. Strengthening Bengaluru’s public transport infrastructure through an integrated, sustainable and efficient metro network remains one of our key priorities.
#ಇದುನಮ್ಮಮೆಟ್ರೋ #IdhuNammaMetro
ಕೇವಲ ಒನಕೆಯನ್ನೇ ಹಿಡಿದು ಶತ್ರುಪಡೆಯನ್ನೇ ಮಟ್ಟಹಾಕಿ, ಚಿತ್ರದುರ್ಗದ ಕೋಟೆಯ ಗೌರವವನ್ನು ಕಾಪಾಡಿದ ಅಮರ ಚೇತನ ಒನಕೆ ಓಬವ್ವ.ವೀರಮರಣ ಅಪ್ಪಿದ ದುರ್ಗದ ದುರ್ಗೆಯ ನೆನಪು ನಮ್ಮ ಸಮಾಜದಲ್ಲಿ ಸದಾ ಜಾಗೃತವಾಗಿರಲಿ. ನಾಡಿನ ಹೆಮ್ಮೆಯ ನಾರಿ ಓಬವ್ವ ಅವರ ಧೈರ್ಯ, ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ, ನಿಷ್ಠೆ ನಮಗೆಲ್ಲಾ ಸ್ಫೂರ್ತಿಯಾಗಲಿ.
The foundations of a progressive nation rest on education, equality and unity, ideals that Maulana Abul Kalam Azad championed throughout his life. His contributions to institution-building, higher education and the promotion of India's rich cultural heritage continue to shape the nation. Remembering a visionary who dedicated his life to building an inclusive and educated India on his birth anniversary.
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು.
ಬರವಣಿಗೆಯನ್ನೇ ಆಯುಧವಾಗಿಸಿಕೊಂಡು, ತಮ್ಮ ಕ್ರಾಂತಿಕಾರಿ ಚಿಂತನೆಗಳು ಹಾಗೂ ಸೃಜನಶೀಲ ಸಾಹಿತ್ಯದ ಮೂಲಕ ಸಮಾಜದಲ್ಲಿದ್ದ ಕುಂದುಕೊರತೆಗಳನ್ನು ತಿದ್ದಿ ತೀಡಿದ ಜ್ಞಾನಪೀಠ ಪುರಸ್ಕೃತ ಮಹಾಕವಿ. ಕನ್ನಡ ಸಾಹಿತ್ಯಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರ ಪ್ರಗತಿಪರ ಆಲೋಚನೆಗಳು ನಮಗೆಲ್ಲರಿಗೂ ಸದಾ ಪ್ರೇರಣೆ.
ಬೆಂಗಳೂರಿನ ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಬಿಡಿಎ ಮೂಲಕ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅರ್ಹ ಮನೆಗಳ ಮರುಮಂಜೂರಾತಿ, ಭೂಮಿ ನೀಡಿದವರಿಗೆ ನಿವೇಶನ ಹಂಚಿಕೆ, ನಿವೇಶನದ ಅಂಚಿನ ಜಾಗದ ಹಂಚಿಕೆ ಹಾಗೂ ಶುದ್ಧ ಕ್ರಯಪತ್ರ ನೋಂದಣಿಗೆ ವಿಶೇಷ ಮೇಳದಂತಹ ಕ್ರಮಗಳು ಆಸ್ತಿ ಮಾಲೀಕರಿಗೆ ಅನುಕೂಲವಾಗಲಿವೆ. ನಾಗರಿಕರ ಬಹುದಿನಗಳ ನಿರೀಕ್ಷೆಗಳಿಗೆ ಸ್ಪಂದಿಸಿ, ಆಸ್ತಿ ಸಂಬಂಧಿತ ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರಿನ ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಬಿಡಿಎ ಮೂಲಕ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅರ್ಹ ಮನೆಗಳ ಮರುಮಂಜೂರಾತಿ, ಭೂಮಿ ನೀಡಿದವರಿಗೆ ನಿವೇಶನ ಹಂಚಿಕೆ, ನಿವೇಶನದ ಅಂಚಿನ ಜಾಗದ ಹಂಚಿಕೆ ಹಾಗೂ ಶುದ್ಧ ಕ್ರಯಪತ್ರ ನೋಂದಣಿಗೆ ವಿಶೇಷ ಮೇಳದಂತಹ ಕ್ರಮಗಳು ಆಸ್ತಿ ಮಾಲೀಕರಿಗೆ ಅನುಕೂಲವಾಗಲಿವೆ. ನಾಗರಿಕರ ಬಹುದಿನಗಳ ನಿರೀಕ್ಷೆಗಳಿಗೆ ಸ್ಪಂದಿಸಿ, ಆಸ್ತಿ ಸಂಬಂಧಿತ ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
The welfare of our farmers remains a priority for our government. Every eligible farmer is entitled to the full ₹5,000 in drought compensation, and there should be no confusion about this.
The amount credited so far is only the first instalment. Farmers who received ₹2,000 will receive the remaining ₹3,000, while those who received ₹2,500 will receive the balance ₹2,500 in the next instalment. We have also enhanced compensation for rain-fed, irrigated and perennial crops, going beyond SDRF/NDRF norms with additional support from the State Government's own resources.
Our Government will ensure that every eligible drought-affected farmer receives the full compensation due to them.
ಬರ ಪರಿಹಾರದ ಬಗ್ಗೆ ಗೊಂದಲ ಬೇಡ; ಎಲ್ಲ ಅರ್ಹ ರೈತರಿಗೂ ₹5,000 ನೆರವು
ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. SDRF/NDRF ನಿಯಮಗಳಡಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಕ್ರಮವಾಗಿ ₹1,500, ₹2,600 ಮತ್ತು ₹3,200 ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ ₹5,000 ಬರ ಪರಿಹಾರ ನೀಡಲಿದೆ. ಈ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ. ಅರ್ಹ ರೈತರು ಬೆಳೆ ನಷ್ಟದ ಆಧಾರದ ಮೇಲೆ ₹60,000ವರೆಗೆ ಇನ್ಪುಟ್ ಸಬ್ಸಿಡಿ ನೆರವನ್ನು ಪಡೆಯಬಹುದು. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ.
Turning the first few pages of Belonging: A Journey of Love by Smt. @SoniaGandhi avaru.
A story of love, loss, resilience and belonging. Her journey reflects the experiences of a woman who made India her home and embraced a life shaped by personal convictions and public responsibility. Looking forward to reading her reflections on an extraordinary journey.
ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂದು ಅವರ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಸಮಾಲೋಚನೆ ನಡೆಸಿದೆ.
@kharge
ಗೃಹಲಕ್ಷ್ಮಿಯ ಆಸರೆ, ಸ್ವಾವಲಂಬನೆಯ ಬದುಕಿಗೆ ಹೊಸ ಭರವಸೆ
ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಈ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತಷ್ಟು ಬಲ ತುಂಬಿದೆ. ವ್ಯಾಪಾರವನ್ನು ವಿಸ್ತರಿಸಲು, ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ನೆರವು ಆಸರೆಯಾಗಿದೆ. ಇದು ಕೇವಲ ಒಬ್ಬ ಮಹಿಳೆಯ ಯಶೋಗಾಥೆಯಲ್ಲ, ಗೃಹಲಕ್ಷ್ಮಿ ಯೋಜನೆಯಿಂದ ಹೊಸ ಭರವಸೆ ಕಂಡುಕೊಂಡ ನಾಡಿನ ಹಲವಾರು ಮಹಿಳೆಯರ ಬದುಕಿನ ಕಥೆ.
ನನಗೆ ಅವರು ಪ್ರೀತಿಯಿಂದ ನೀಡಿದ ಚಕ್ಕುಲಿ ಮತ್ತು ನಿಪ್ಪಟ್ಟಿನಲ್ಲೂ ಅವರ ಶ್ರಮ, ಆತ್ಮೀಯತೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅವರಿಗಿರುವ ಕೃತಜ್ಞತೆ ಎದ್ದು ಕಾಣುತ್ತಿತ್ತು.
ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಬ್ಬದ ಹಾರ್ದಿಕ ಶುಭಾಶಯಗಳು! ದಾನ, ಧರ್ಮ, ತ್ಯಾಗ ಹಾಗೂ ಜನಕಲ್ಯಾಣದ ಆದರ್ಶಗಳನ್ನು ಸಾರುವ ಬಲಿಚಕ್ರವರ್ತಿಯ ಜೀವನವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ. ಬಲಿರಾಜ್ಯದ ಸಮೃದ್ಧಿ ಮತ್ತು ಸಮಾನತೆಯ ಆಶಯದಂತೆ ನಾಡಿನ ಪ್ರತಿಯೊಂದು ಮನೆಮನಗಳಲ್ಲೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಂತಸ ಸದಾ ನೆಲೆಸಿರಲಿ.
Bengaluru belongs to all of us, and its development must make life easier for the people who call this city home.
With this commitment, we have taken four important decisions through BDA to benefit citizens. From reducing regularisation charges by 50% for eligible homeowners to providing incentive sites for landowners, facilitating adjoining marginal land allotment and organising an Absolute Sale Deed Mela for around 20,000 allottees, these measures address long-pending needs.
We will continue working towards a Bengaluru where development brings greater convenience, security and opportunities to its people.










































