ತಾವು ಮಾಡದ ಕೆಲಸಕ್ಕೆ ಪುಕ್ಕಟ್ಟೆ ಪ್ರಚಾರ ಪಡೆಯೋದ್ರಲ್ಲಿ ಬಿಜೆಪಿಗರು ನಂ.1.
ನಮ್ಮ ಮೆಟ್ರೋ ಯೋಜನೆಗೆ ಖರ್ಚಾದ ಪ್ರತಿ 6 ರೂಪಾಯಿಯಲ್ಲಿ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಕೇವಲ 1 ರೂ. ಇನ್ನುಳಿದ 5 ರೂಗಳನ್ನು ರಾಜ್ಯ ಸರ್ಕಾರವೇ ಭರಿಸಿದೆ.
ಆದರೂ ಮೆಟ್ರೋ ಯೋಜನೆಯನ್ನು ಸಂಪೂರ್ಣ ತಾವೇ ಅನುಷ್ಠಾನ ಮಾಡಿದವರಂತೆ ಕೊಚ್ಚಿಕೊಳ್ಳುತ್ತಾರೆ.
LIVE: ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. xitter.twitterapi.xyz/i/broadcasts/2jPOmvKNP…
942
ಆರ್ಥಿಕವಾಗಿ ಹಿಂದುಳಿದ, ಮಕ್ಕಳಿಲ್ಲದ ದಂಪತಿಗಳಿಗಾಗಿ ಕಾಂಗ್ರೆಸ್ ಸರ್ಕಾರ ಉಚಿತ IVF ಯೋಜನೆ ಜಾರಿಗೊಳಿಸಿದೆ.
5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯದ 4 ನಾಲ್ಕು ಪ್ರಮುಖ ನಗರಗಳಲ್ಲಿ IVF ಸೇವಾ ಕೇಂದ್ರಗಳು ಆರಂಭಗೊಳ್ಳಲಿವೆ.
ಎರಡು ಪ್ರಮುಖ ಕಾರಿಡಾರ್ ಗಳನ್ನು ಹೊಂದಿರುವ 44.65 ಕಿ.ಮೀ. ಉದ್ದದ ಮೆಟ್ರೋ 3ನೇ ಹಂತದ ಯೋಜನೆ 15, 611 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಈ ಯೋಜನೆಯಲ್ಲೂ ಕರ್ನಾಟಕದ ಪಾಲು 13,352 ಕೋಟಿ ರೂ., (85.5%) ಕೇಂದ್ರದ ಪಾಲು ಕೇವಲ 2,259 ಕೋಟಿ ರೂ. (14.5%).
ಬಿಜೆಪಿಗರೇ, ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಮತ್ತು ಪಾಲು ನೀವು ಹೇಳಿದಷ್ಟು ಇಲ್ಲ ಎಂಬುದು ನಿಮಗೆ ಗೊತ್ತಿರಲಿ.
30% ಎಥೆನಾಲ್ ಮೂಲಕ ಜನಸಾಮಾನ್ಯರಿಗೆ ಕಲಬೆರಕೆ ಇಂಧನ ತೈಲ ನೀಡುತ್ತಿರುವುದನ್ನು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಒಪ್ಪಿದ್ದಾರೆ.
30% ಎಥೆನಾಲ್ ಬಳಕೆಗೆ ಕೇಂದ್ರ ಸರ್ಕಾರದ ಸಚಿವಾಲಯ ಮಟ್ಟದಲ್ಲಿ ತೀರ್ಮಾನ ಮಾಡಿದ್ದು ನಿಜವೇ ಆಗಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರ ಕರ್ನಾಟಕದ ಪರೀಕ್ಷೆ ಸುಳ್ಳು ಎಂದು ಹೇಳುತ್ತಿದೆ.
ಭಾರತದಲ್ಲಿನ ಬಹುತೇಕ ವಾಹನಗಳು 20% ಎಥೆನಾಲ್ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಕೇಂದ್ರ ಸರ್ಕಾರ 30% ಬಳಕೆಗೆ ತೀರ್ಮಾನಿಸಿದ್ದರೆ ಅದಕ್ಕೆ ಮಾಡಿಕೊಂಡಿರುವ ತಯಾರಿ ಏನು? ಇದರಿಂದ ಜನಸಾಮಾನ್ಯರ ವಾಹನಗಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಇದಕ್ಕೆ ಹೊಣೆ ಯಾರು?
2025ರ ಜನವರಿಯಲ್ಲಿ ನಾವು ರೆಡ್ ಲೈನ್ ಮೆಟ್ರೋ ಕಾಮಗಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಇದುವರೆಗೆ ನಮಗೆ ಒಪ್ಪಿಗೆ ಸಿಕ್ಕಿಲ್ಲ. ಪ್ರಧಾನಿಗೆ ಈ ಸಂಬಂಧ ಬೇಗ ಒಪ್ಪಿಗೆ ನೀಡುವಂತೆ ಮನವಿ ಮಾಡಲಿದ್ದೇವೆ. ಮುಂದಿನ ವರ್ಷದ ಅಂತ್ಯದೊಳಗೆ ಕಾಮಗಾರಿ ಆರಂಭಿಸುವ ಗುರಿ ಇದೆ.
@krishnabgowda
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು
They promised cheaper fuel. They gave you E31: lower mileage, higher repair bills, and the same old price.
ಮೆಟ್ರೋ ಕಾಮಗಾರಿಗೆ ಕೇಂದ್ರ ಸರ್ಕಾರದ ಮೂಲಕ ಬರುವ ಸಾಲವನ್ನು ತೀರಿಸೋದು ರಾಜ್ಯ ಸರ್ಕಾರ. ಆದರೆ ಆ ಸಾಲವನ್ನು ತಾವೇ ತೀರಿಸುತ್ತೇವೆ ಎನ್ನುವ ಬಿಜೆಪಿ ಸರ್ಕಾರ, ರಾಜ್ಯಕ್ಕೆ ಅಪಮಾನ ಮಾಡುತ್ತಿದೆ. ಇದೇ ಅವರ ಉದ್ಯೋಗ. ಮೊದಲು ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ನೀಡಿ, ಆಮೇಲೆ ಮಾತನಾಡಲಿ.
@krishnabgowda
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು
ನಮ್ಮ ಮೆಟ್ರೋ ಯೋಜನೆಯಲ್ಲಿ ಕರ್ನಾಟಕ ಸರ್ಕಾರದ ಕೊಡುಗೆಯೇ ಹೆಚ್ಚು.
ಮೊದಲ ಹಂತದಲ್ಲಿ ಕೇಂದ್ರ ಸರ್ಕಾರದ ಪಾಲು 20.8% (₹3,073 ಕೋಟಿ), ರಾಜ್ಯದ ಪಾಲು ₹11,688 ಕೋಟಿ (79.2%) ಆಗಿದೆ. ನಮ್ಮ ಮೆಟ್ರೋ ಯಶಸ್ಸು ಕರ್ನಾಟಕ ಸರ್ಕಾರಕ್ಕೆ ಸಲ್ಲಬೇಕು.
ಕರಕುಶಲ ವಸ್ತುಗಳ ಉದ್ಯಮ ಆರಂಭಿಸಲು ಸ್ಫೂರ್ತಿಯಾಯ್ತು, ಸ್ವಾಭಿಮಾನದ ಬದುಕಿಗೆ ಬುನಾದಿಯಾಯ್ತು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಹಣ.
ʻನಮ್ಮ ಶಾಲೆ ನಮ್ಮ ಜವಾಬ್ದಾರಿʼ (CSR) ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.
ಖಾಸಗಿ ಶಾಲೆಗಳು ಹಾಗೂ 45ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಒಂದು ಸಂಸ್ಥೆ ಗರಿಷ್ಠ 3 ಶಾಲೆಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಸುಮಾರು 2 ಸಾವಿರ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ಕಲಬುರಗಿ ಜಿಲ್ಲೆ ಹಾಗೂ ಮೊಳಕಾಲ್ಮೂರ್ ತಾಲೂಕಿನಲ್ಲಿ ಸುಗಮ ರಸ್ತೆ ಸಂಪರ್ಕ ಹಾಗೂ ಮೂಲಸೌಕರ್ಯ ಒದಗಿಸಲು ಕಾಂಗ್ರೆಸ್ ಸರ್ಕಾರ ಒಟ್ಟು 33 ಕೋಟಿ ರೂ. ಅನುದಾನ ಒದಗಿಸಿದೆ.
ಕಲಬುರಗಿಯ ಕನ್ಸೂರು ಸೇತುವೆ ಹಾಗೂ ಎತ್ತರಿಸಿದ ಸಂಪರ್ಕ ಸೇತುವೆ ಹಾಗೂ ಮೊಳಕಾಲ್ಮೂರು ಜಿನಗಿಹಳ್ಳ ಸೇತುವೆ ಮರು ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳಾದ ಆಚಾರ್ಯ ಜೆ.ಬಿ. ಕೃಪಲಾನಿ ಅವರ ಜನ್ಮದಿನದಂದು ಅವರಿಗೆ ನಮ್ಮ ಅನಂತ ನಮನಗಳು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯೊಂದಿಗೆ ದೇಶದಲ್ಲಿ ಶಿಕ್ಷಣದ ಬೆಳಕು ಹಚ್ಚಿದ ಡಾ. ಮೌಲಾನ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಅವರ ನೆನಪಿನಲ್ಲಿ ಈ ದಿನವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವೆಂದು ಆಚರಣೆ ಮಾಡಲಾಗುತ್ತಿದೆ.
ಇತರರಿಂದ ಕಲಿಯುವುದು ಮತ್ತು ಇತರರಿಗೂ ಕಲಿಸುವುದು ಎಂಬ ಅವರ ಸಂದೇಶವನ್ನು ನಾವೆಲ್ಲರೂ ಪಾಲಿಸೋಣ.
ತಮ್ಮ ಸಾಹಿತ್ಯ, ಚಿಂತನೆಯಿಂದ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪು ಅವರ ಪುಣ್ಯಸ್ಮರಣೆಯಂದು ನಮ್ಮ ಗೌರವಪೂರ್ವಕ ನಮನಗಳು.
ಸಾರಿಗೆ ನೌಕರರ ಆರ್ಥಿಕ ಭದ್ರತೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ.
ಸರ್ಕಾರಿ ನೌಕರರ ಶ್ರಮಕ್ಕೆ ಗೌರವ ನಮ್ಮ ಆದ್ಯತೆ.
ಎಐಸಿಸಿ ಅಧ್ಯಕ್ಷರಾದ @kharge ಅವರನ್ನು ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದರು.
ರಾಜ್ಯ ಸರ್ಕಾರದ ಹಣಕ್ಕೆ ಕೇಂದ್ರ ಸರ್ಕಾರದ ಪ್ರಚಾರ.
ನಮ್ಮ ಮೆಟ್ರೋ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಹೂಡಿಕೆ ಮಾಡಿದರೂ ಕೇಂದ್ರ ಸರ್ಕಾರ ಹೆಚ್ಚಿನ ಪ್ರಚಾರ ಪಡೆಯುತ್ತಿದೆ.
ಮೆಟ್ರೋ ಯೋಜನೆಯಲ್ಲಿ ಅದರಲ್ಲೂ ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾಣಿಕೆ ಸುಮಾರು 15% ಮಾತ್ರ. ಉಳಿದ 85% ಕಾಣಿಕೆ, ಶ್ರಮ, ಜವಾಬ್ದಾರಿ ಎಲ್ಲವೂ ರಾಜ್ಯ ಸರ್ಕಾರದ್ದಾಗಿದೆ.
ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ₹1 ಖರ್ಚು ಮಾಡಿದರೆ, ಕರ್ನಾಟಕ ಸರ್ಕಾರ ₹5 ಖರ್ಚು ಮಾಡುವ ಪರಿಸ್ಥಿತಿ ಇದೆ. ಇದುವರೆಗೂ ನಮ್ಮ ಮೆಟ್ರೋ ಯೋಜನೆಯಲ್ಲಿ ಅನುಮೋದನೆಗೊಂಡ ಯೋಜನೆ ವೆಚ್ಚ ₹77,891 ಕೋಟಿ. ಅದರಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ₹12,600 ಕೋಟಿ (16.2%) ಮಾತ್ರ. ಆದರೆ ಕರ್ನಾಟಕ ಸರ್ಕಾರದ ಪಾಲು ಬರೋಬ್ಬರಿ ₹65,291 ಕೋಟಿ (83.8%).
ಇಷ್ಟಾದರೂ ಪ್ರಚಾರ ಮಾತ್ರ ಕೇಂದ್ರ ಸರ್ಕಾರ ಪಡೆಯುತ್ತಿದೆ. ಇದು ಕೇಂದ್ರ ಸರ್ಕಾರದ ಕ್ರೆಡಿಟ್ ಕಳ್ಳತನ.
















